
ವಿಶಿಷ್ಠ ಅಭಿನಯ ಸಾಮರ್ಥ್ಯಗಳನ್ನು ಸಿದ್ಧಿಸಿಕೊಂಡ ಕೋಳ್ಯೂರುರವರ ತುಳು ಪ್ರಸಂಗಗಳಲ್ಲಿನ ಪಾತ್ರಗಳು ಅನನ್ಯವಾದದ್ದು. ಮೇಳದ ಜತೆ ಪಾತ್ರಧಾರಿಯವರೊಂದಿಗಿನ ಇವರ ಸಂವಾದಗಳು ಮತ್ತು ಅಭಿನಯಗಳು ಸಹಜತೆಯಿಂದ ಕೂಡಿರುವಂತಹದ್ದು ಹಾಗೂ ಅತ್ಯಂತ ವಿಶೇಷವಾದದ್ದಾಗಿದೆ.. ತುಳು ಪ್ರಸಂಗಗಳಲ್ಲಿನ ಇವರ ರಾಣಿ, ರಾಜಕುಮಾರಿ,ಪ್ರತಿನಾಯಕಿ, ಸಖಿ ಮತ್ತು ವಿದುಷಿಯಂತಹ ಪಾತ್ರಗಳು ಇದಕ್ಕೆ ಸಾಕ್ಷಿಯಾಗಬಲ್ಲದು.
ತುಳುನಾಡಿನ ಭಾಷೆ ಹಾಗು ಸಂಸ್ಕೃತಿಗೆ ಕೋಟಿಚೆನ್ನಯ, ಸೊರ್ಕುದ ಸಿರಿಗಿಂಡೆ, ತುಳುನಾಡ ಸಿರಿ, ಕಾಡಮಲ್ಲಿಗೆ, ಕೋಡ್ದಬ್ಬು, ಪಟ್ಟದ ಪದ್ಮಲಿ, ದೇವಪೂಂಜ ಪ್ರತಾಪ ಎಂಬಿತ್ಯಾದಿ ಪ್ರಸಂಗಗಳಲ್ಲಿ ಬರುವ ದೇಯಿ- ಕಿನ್ನಿದಾರು, ಸಿರಿಗಿಂಡೆ,ಸಿರಿ,ಬೊಮ್ಮಕ್ಕ, ತನ್ನಿಮಾನಿಕ, ನಾಗಮ್ಮ, ಶ್ಯಾಮಲಾದೇವಿ ಇತ್ಯಾದಿ ಸಾತ್ವಿಕ ಭಾವದ ಸ್ತ್ರೀ ಪಾತ್ರಗಳ ನಿರ್ವಹಣೆ ಮೂಲಕ ತುಳುವ ಮಣ್ಣಿನ ಜನರ ಮನಸೂರೆಗೊಂಡು ತನ್ನದೇ ಆದ ಕೊಡುಗೆ ನೀಡಿರುವಂತ ಮಹಾನ್ ಕಲಾವಿದರಿವರು.


ಕೋಳ್ಳೂರರು ಅಳಕೆ ರಾಮಯ್ಯ ರೈಗಳೊಂದಿಗೂ, ಮಲ್ಪೆ ರಾಮದಾಸ ಸಾಮಗ ರೊಂದಿಗೂ ನಡೆಸಿದ ತುಳು ಪ್ರಸಂಗಗಳ ಸಂವಾದ ಹಾಗೂ ಸಹಜ ಅಭಿನಯ ಈ ರಂಗದ ಉಜ್ವಲ ಅಧ್ಯಾಯಗಳು.
ಇವರನ್ನು ಅಭಿನಂದಿಸಿ ಒಂದೆಡೆ ಮಲ್ಪೆ ರಾಮದಾಸ ಸಾಮಗರು ಹೇಳಿದ ಮಾತು ಇಲ್ಲಿ ಸ್ಮರಣೀಯ, “ರಾಮಚಂದ್ರರ ಎಷ್ಟೋ ಸ್ತ್ರೀಪಾತ್ರಗಳು ಉತ್ತಮವೆ ಆಗಿ ಕಾಣಿಸಿವೆ. ಆದರೆ ‘ಸೊರ್ಕುದ ಸಿರಿಗಿಂಡೆ’ ಯಾಗಿ ಅಭಿನಯಿಸಿದುದು ಮಾತ್ರ ಅನನ್ಯ. ಒಂದೊಂದು ದೃಶ್ಯದಲ್ಲೂ ಭಿನ್ನ ಭಾವಚ್ಛಾಯೆ ಬರಬೇಕಾದ ಈ ಪಾತ್ರದ ನಿರ್ವಹಣೆ ಬಹು ಕಠಿನ. ಆ ವಿಶಿಷ್ಟ ಅಭಿನಯ ಸಾಮರ್ಥ್ಯ ಕಂಡು ನನಗೆ ಆಶ್ಚರ್ಯವಾಗಿದೆ”.





ವಿಳಾಸ
ಕಲಾಪ್ರಸಾದ, ಅಂಚೆ ಇನ್ನಂಜೆ.
ಶಂಕರಪುರ, ಉಡುಪಿ ತಾಲೂಕು.
ಪಿನ್ ಕೋಡ್ 576122.
ಕರ್ನಾಟಕ ರಾಜ್ಯ. ಭಾರತ.
ಮಿಂಚಿನ ಅ೦ಚೆ
kollyurramachandrarao@gmail.com
ಮೊಬೈಲ್:
+91-8123709799
LEGAL INFORMATION
