Responsive Menu
Add more content here...

ಧರ್ಮಸ್ಥಳ ಮೇಳ ೧೯೫೨-೫೩ರ ತಿರುಗಾಟಕ್ಕೆ ಅಣಿಯಾದಾಗ ಇವರಿಗೆ ಇನ್ನೊಂದು ತಿರುವು ದೊರೆಯಿತು. ಆ ವರೆಗೆ ಮುಖ್ಯ ಸ್ತ್ರೀ ವೇಷಧಾರಿಯಾಗಿದ್ದು ಕೋಳ್ಯೊರರಿಗೆ ಸ್ತ್ರೀ ಪಾತ್ರದ ಕುರಿತು ತರಬೇತಿ ನೀಡುತ್ತಿದ್ದ ಕರ್ಗಲ್ಲು ಸುಬ್ಬಣ್ಣ ಭಟ್ಟರು ಹರೆಯವೇರಿದ ಕಾರಣ ತಾನು ಪುರುಷವೇಷ ಧರಿಸತೊಡಗಿ ಕೋಳ್ಳೂರರಿಗೆ ಮುಖ್ಯ ಸ್ತ್ರೀ ವೇಷ ಬರುವ ಹಾಗೆ ಮಾಡಿದರು. ಬ್ರಹ್ಮ ಕಪಾಲದ ಬ್ರಹ್ಮ, ಶ್ರೀಕೃಷ್ಣ ಲೀಲೆಯ ವಸುದೇವ, ದೇವೇಂದ್ರ, ದುಷ್ಯಂತ, ಕಾರ್ತವೀರ್ಯ ಇತ್ಯಾದಿ ಕಿರೀಟದ ವೇಷಗಳನ್ನು ಧರಿಸತೊಡಗಿದ ಸುಬ್ಬಣ್ಣ ಭಟ್ಟರು, ಸ್ತ್ರೀ ಪಾತ್ರದ ಜತೆ ಹೊಂದಾಣಿಕೆ ಹೇಗೆಂಬುದನ್ನು ಇವರಿಗೆ ತಿಳಿಸಿಕೊಡತೊಡಗಿದರು.

“ಯಕ್ಷಗಾನ ರಂಗದಲ್ಲಿ ಕಲಾವಿದ ಎಷ್ಟೆ ಸಮರ್ಥನಾಗಿದ್ದರೂ ನಾಯಕ ಪಾತ್ರವನ್ನು ವಹಿಸುವವನು ಮೊದಲು ನಾಯಕಿ ಪಾತ್ರವನ್ನು ಅಭಿನಯಿಸಿದವನಾಗಿದ್ದಲ್ಲಿ ಜೋಡಿ ಕೂಡಿಕೊಳ್ಳುತ್ತದೆ ಎಂಬುದರಲ್ಲಿ ಸಂದೇಹವಿಲ್ಲ”ಎನ್ನುತ್ತಾರೆ ಕೋಳ್ಯೂರರು.

Agari Srinivasa Bhagavata

ಮುಂದಿನ ಹತ್ತು ವರ್ಷಗಳ ಕಾಲ ಅಗರಿ ಶ್ರೀನಿವಾಸ ಭಾಗವತರು, ಶಾಸ್ತ್ರಿ, ಕೋಳ್ಯೊರರ ಯುಗವಾಗಿ ಧರ್ಮಸ್ಥಳ ಮೇಳ ಮೆರೆಯಿತು. ಹೆಚ್ಚಿನೆಲ್ಲ ಪ್ರಸಂಗಗಳ ವಿಭಿನ್ನ ವ್ಯಕ್ತಿತ್ವಗಳ ಸ್ತ್ರೀ ಪಾತ್ರಗಳನ್ನು ಯಶಸ್ವಿಯಾಗಿಯೆ ನಿರ್ವಹಿಸಿದರು. ಶೃಂಗಾರ, ವೀರ, ಕರುಣ, ಹಾಸ್ಯ ಇತ್ಯಾದಿ ರಸಗಳಲ್ಲಿ ಸ್ತ್ರೀ ಪ್ರತ್ಯೇಕತೆಯನ್ನು ಅವರು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿದರು.

ಇವರನ್ನು ರಂಗದಲ್ಲಿ ಬಹುವಾಗಿ ತಿದ್ದಿದವರು ಅಗರಿ ಶ್ರೀನಿವಾಸ ಭಾಗವತರು. ಅವರು ನೀಡಿದ ಮಾರ್ಗದರ್ಶನದ ಮಾತೊಂದು ಇವರ ಕಿವಿಗಳಲ್ಲಿ ಸದಾ ಗುಂಯ್ಗುಟ್ಟುತ್ತಿದೆ

“ಮಗೂ, ರಂಗದಲ್ಲಿ ಎಂದಿಗೂ ಉದಾಸೀನನಾಗಬೇಡ. ಪಾತ್ರ ಗೌರವವನ್ನು ಮರೆತು ಮಾತನಾಡಬೇಡ, ಆಡುವ ಮಾತೇನಿದ್ದರೂ ಭಾವಪೂರ್ಣವಾಗಿ ಆಡು, ಅವಿದ್ಯಾವಂತರ ಕೈ ಚಪ್ಪಾಳೆಗೆ ಮರುಳಾಗದೆ ವಿದ್ವಾಂಸನ ಮೆಚ್ಚುಗೆಗೆ ಪಾತ್ರನಾಗು”

೧೯೬೩ರಿಂದ ಸುರತ್ಕಲ್, ಕೂಡ್ಲು, ಕರ್ನಾಟಕ ಮೇಳಗಳಲ್ಲಿ ಕೆಲಸ ಮಾಡಿದ ಕೋಳ್ಯೊರರು ಸ್ತ್ರೀ ಪಾತ್ರಧಾರಿಯ ಅಗ್ರಸ್ಥಾನವನ್ನು ಇನ್ನಾರಿಗೂ ಬಿಟ್ಟುಕೊಟ್ಟವರಲ್ಲ.

ಸ್ತ್ರೀ ಪಾತ್ರ ಯಶಸ್ವಿಯಾಗುವಲ್ಲಿ ಆಕಾರ, ಗಾತ್ರ, ಸ್ವರ ಇತ್ಯಾದಿಗಳು ಪರಿಶ್ರಮಕ್ಕೆ ಅಪೀತವಾಗಿ, ದೈವದತ್ತವಾಗಿ ಸಿಗಬೇಕಾದ ಅಂಶಗಳು, ಇವೆಲ್ಲವೂ ಹೆಚ್ಚು ಕಡಿಮೆಯಲ್ಲ ಎಂಬಷ್ಟು ಅಳತೆಬದ್ಧವಾಗಿ ಸಿದ್ಧಿಸಿದ ಬಹುಶಃ ಶತಮಾನದ ಏಕೈಕ ವ್ಯಕ್ತಿತ್ವ ಕೋಳ್ಯೂರರು.

ವಿಳಾಸ

ಕಲಾಪ್ರಸಾದ, ಅಂಚೆ ಇನ್ನಂಜೆ.
ಶಂಕರಪುರ, ಉಡುಪಿ ತಾಲೂಕು.
ಪಿನ್ ಕೋಡ್ 576122.
ಕರ್ನಾಟಕ ರಾಜ್ಯ. ಭಾರತ.

ಮಿಂಚಿನ ಅ೦ಚೆ

kollyurramachandrarao@gmail.com

ಮೊಬೈಲ್:

+91-8123709799