Responsive Menu
Add more content here...

Dr. Kollyur Ramachandra Rao

ಕೋಳ್ಯೊರು ರಾಮಚಂದ್ರ ರಾಯರು ತೆಂಕುತಿಟ್ಟಿನ ಸ್ತ್ರೀವೇಷದ ಆದ್ಯ ಪ್ರವರ್ತಕರಲ್ಲೊಬ್ಬರು. ಯಕ್ಷಗಾನದ ಪಾರಂಪರಿಕ ಸೊಗಡಿಗೆ ಪೂರಕವಾಗಿ ವಿಶಿಷ್ಟ ರಂಗಪ್ರಜ್ಞೆಯೊಂದಿಗೆ ಕಳೆದ ಆರೇಳು ದಶಕಗಳಂದ ವಿವಿಧ ಸ್ತ್ರೀ ಪಾತ್ರಗಳನ್ನು ನಿರ್ವಹಿಸಿದ ಅಪೂರ್ವ ಕಲಾವಂತಿಕೆ ಅವರದು .ಪೌರಾಣಿಕ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸುವುದರಲ್ಲಿ ಅವರದು ಎತ್ತರದ ಸಿದ್ಧಿ, ತುಳು ಪ್ರಸಂಗಗಳಲ್ಲಿ ಅವರ ಅಭಿನಯ ಅನ್ಯಾದೃಶ. ಪ್ರಸಂಗ ಯಾವುದೇ ಇರಲಿ ‘ಗರತಿ’ಯಿಂದ ‘ಗಯ್ಯಾಳಿ’ಯವರೆಗೆ ಸಾಹಿತ್ಯ ಶುದ್ಧ ಸಂಭಾಷಣೆಯೊಂದಿಗೆ ನವರಸಭರಿತವಾಗಿ ಬಿಚ್ಚಿಕೊಳ್ಳುವ ಅವರ ಪಾತ್ರಾಭಿವ್ಯಕ್ತಿ ರಂಗಸ್ಥಳಕ್ಕೊಂದು ಮಾದರಿ. 1932ರಲ್ಲಿ ಬಂಟ್ವಾಳ ತಾಲೂಕಿನ ಕರೋಪಾಡಿಯಲ್ಲಿ ಜನಿಸಿದ ರಾಮಚಂದ್ರ ರಾಯರು ತಮ್ಮ ಬಾಲ್ಯವನ್ನು ಕಾಸರಗೋಡಿಗೆ ಸೇರಿದ ಕೋಳ್ಳೂರಿನಲ್ಲಿ ಕಳೆದರು. ಯಕ್ಷಗಾನದ ನಾಟ್ಯಾಚಾರ್ಯ ದಿ।ಕುರಿಯ ವಿಠಲ ಶಾಸ್ತ್ರಿಗಳು ಅವರ ಗುರುಗಳು. ಧರ್ಮಸ್ಥಳ, ಕಟೀಲು, ಕರ್ನಾಟಕ, ತುಂಡಾವು, ಕದ್ರಿ ಮೇಳಗಳಲ್ಲಿ ಸಾರ್ಥಕ ತಿರುಗಾಟ ನಡೆಸಿದ ಕೋಳ್ಯೊರು ತಮ್ಮ ಸುಂದರ ಶರೀರ, ಶಾರೀರ ಮತ್ತು ನೃತ್ಯ ಭಂಗಿಗಳಿಂದ ಸ್ತ್ರೀ ಭೂಮಿಕೆಗೆ ಒಂದು ಅಚ್ಚುಕಟ್ಟುತನ, ಶಿಸ್ತು, ಗ್ಲಾಮರ್ ತಂದುಕೊಟ್ಟ ಕಲಾವಿದರು. ಹಿರಿಯ ಬಲಿಪ ಭಾಗವತರು, ಅಗರಿ ಭಾಗವತರು, ಬಳಿಂಜ ಮೈಂದಪ್ಪ ರೈ, ದಾಮೋದರ ಮಂಡೆಚ್ಚ, ನೆಡ್ಲೆ ನರಸಿಂಹ ಭಟ್, ಶೇಣಿ, ಸಾಮಗ, ಅಳಿಕೆ, ಬೋಳಾರ, ನಾರಂಪಾಡಿ, ಮಂಕುಡೆ, ಪುಳಿಂಚೆ, ಮಿಜಾರ್, ಬಡಗಿನ ಮತ್ತು ಬಡಾ ಬಡಗಿನ ಪ್ರಸಿದ್ಧ ಹಿರಿಯ ತಲೆಮಾರಿನ ಕಲಾವಿದರೊಂದಿಗೆ ಪಾತ್ರವಹಿಸಿ ಯಕ್ಷರಂಗದಲ್ಲಿ ವರ್ಣರಂಜಿತ ಇತಿಹಾಸ ನಿರ್ಮಿಸಿದ ಖ್ಯಾತಿ ಅವರದು.

ಸಾಧನೆಗಳು

0 +
ಆಟ
music on stage black
0 +
ತಾಳ ಮದ್ದಲೆ
0 +
ಪ್ರಶಸ್ತಿಗಳು
0 +
ಸಂದರ್ಶನಗಳು

ಯಕ್ಷಗಾನವು ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ.

ವಿಳಾಸ

ಕಲಾಪ್ರಸಾದ, ಅಂಚೆ ಇನ್ನಂಜೆ.
ಶಂಕರಪುರ, ಉಡುಪಿ ತಾಲೂಕು.
ಪಿನ್ ಕೋಡ್ 576122.
ಕರ್ನಾಟಕ ರಾಜ್ಯ. ಭಾರತ.

ಮಿಂಚಿನ ಅ೦ಚೆ

kollyurramachandrarao@gmail.com

ಮೊಬೈಲ್:

+91-8123709799