
ಕೋಳ್ಯೂರುರವರು ಆಗಿನ ಕಾಲದ 8ನೇ ತರಗತಿ ಓದಿದರೂ, ಶಾಲಾ ಅಧ್ಯಾಪನ ವೃತ್ತಿಯಲ್ಲಿ ತೊಡಗಿಸಿಕೊಳ್ಳದೆ ತನ್ನ 14 ನೇ ವಯಸ್ಸಿನಲ್ಲೇ ಯಕ್ಷಗಾನ ರಂಗ ಪ್ರವೇಶಿಸಿದ ಕಾರಣ ಪ್ರಸಕ್ತ ನೂರಾರು ಶಿಷ್ಯಂದಿರ ಅತ್ಯುತ್ತಮ “ಯಕ್ಷ ಗುರು” ಎಂದೆನಿಸಿಕೊಂಡಿರುತ್ತಾರೆ. ಹಾಗೂ ಜನಮನ್ನಣೆ ಗಳಿಸಿಕೊಂಡಿದ್ದಾರೆ.
ಶ್ರೀ ಧರ್ಮಸ್ಥಳ ಮೇಳ, ಕಟೀಲು ಮೇಳ, ಇರಾ ಸೋಮನಾಥೇಶ್ವರ ಯಕ್ಷಗಾನ ಮಂಡಳಿ, ಸುರತ್ಕಲ್, ಕೂಡ್ಲು ,ಕರ್ನಾಟಕ ಇತ್ಯಾದಿ ಮೇಳಗಳಲ್ಲಿ ಪಾತ್ರಧಾರಿಯಾಗಿ ನೀಡಿರುವ ಅನುಪಮ ಸೇವೆಯೊಂದಿಗೆ ಅನೇಕರಿಗೆ ಯಕ್ಷಗಾನ ನಾಟ್ಯ ಮತ್ತು ಹೆಜ್ಜೆಯನ್ನೂ ಕಲಿಸಿದ್ದಾರೆ.

ಸುಮಾರು 10 ವರ್ಷಗಳ ಕಾಲ ಅಳಿಕೆ ಸತ್ಯಸಾಯಿ ಸೇವಾ ವಿಹಾರದಲ್ಲಿ, ನಂತರ ಸೂಮಾರು 7 ವರ್ಷಗಳ ಕಾಲ ಶ್ರೀ ಧರ್ಮಸ್ಥಳ ಯಕ್ಷಗಾನ ತರಭೇತಿ ಕೇಂದ್ರ ಹಾಗೂ ಉಜಿರೆ, ಉಡುಪಿ ಪರಿಸರದ ಅನೇಕ ಶಾಲಾ-ಕಾಲೇಜುಗಳ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತ ಕಲಾವಿದರಿಗೂ ಯಕ್ಷಗಾನ ನಾಟ್ಯವನ್ನು ಕಲಿಸಿಕೊಟ್ಟ ಕಲಾ ಆರಾಧಕರೂ, ಗುರುಗಳೂ ಆಗಿದ್ದಾರೆ.
ಲೇಖಕರಾಗಿ ಕೊಡುಗೆ
ಸ್ವತಃ ಲೇಖನಗಳನ್ನು ಪ್ರಕಟಿಸದಿದ್ದರೂ, ಕೋಳ್ಯೂರುರವರು ಯಕ್ಷಗಾನ ಲೋಕದ ಭಂಡಾರ ಹಾಗು ಅನೇಕ ಬರಹಗಾರರಿಗೆ ಸ್ಪೂರ್ತಿಧಾತರು ಎಂದು ಹೇಳಬಹುದು. ವಯೋಸಹಜ ಕಾರಣದಿಂದಾಗಿ ಯಕ್ಷಗಾನ – ಆಟದಲ್ಲಿ ನೇರ ಪಾತ್ರ ನಿರ್ವಹಣೆ ಮಾಡುವುದನ್ನು ಕಡಿಮೆಗೊಳಿಸುತ್ತಾ ಬಂದರೂ ಪೂರ್ಣ ಪ್ರಮಾಣದಲ್ಲಿ ಈ ಕ್ಷೇತ್ರದಿಂದ ವಿರಮಿಸಿದವರಲ್ಲ ಕೋಳ್ಳೂರುರವರು. ಇವರು ತನ್ನದೇ ಆದ ಕೈ ಬರಹದ ಮೂಲಕ ಅನೇಕ ಯಕ್ಷಗಾನ ಪ್ರಸಂಗಗಳ ಸಾಹಿತ್ಯ, ಪಾತ್ರಗಳ ಅರ್ಥಗಾರಿಕೆ, ತಾಳಮದ್ದಲೆಗಳ ಸಂವಾದದ ಮಾತುಗಾರಿಕೆಗಳನ್ನು ಸಾಮಾನ್ಯ ಪುಸ್ತಕದಲ್ಲಿ ದಾಖಲಿಸಿರುತ್ತಾರೆ.
ಇದನ್ನು ಅರಿತುಕೊಂಡಿರುವ ಹಲವಾರು ಆಸಕ್ತ ಯಕ್ಷಗಾನ ಪಾತ್ರಧಾರಿಗಳು, ವಿದ್ಯಾರ್ಥಿಗಳು, ಶಿಷ್ಯಂದಿರು ಇವತ್ತಿಗೂ ಇವರನ್ನು ಸಂಪರ್ಕಿಸಿ ಈ ಪುಸ್ತಕಗಳಲ್ಲಿನ ಸಂವಾದ- ಕಥೆಗಳನ್ನು ಪಡೆಯುತ್ತಿರುವುದು ಇದಕ್ಕೆ ನಿದರ್ಶನ. ಯಕ್ಷಗಾನ ಕಲಾರಂಗ ಹಾಗೂ ಸಮಕಾಲೀನ ಕಲಾವಿದರ ಕುರಿತ ಇವರ ಮಾಹಿತಿಗಳು ಅನೇಕ ದೈನಿಕ ಪತ್ರಿಕೆ, ಸ್ಮರಣ ಸಂಚಿಕೆಗಳು, ನಿಯತಕಾಲಿಕೆ ಹಾಗೂ ದೃಶ್ಯ ಮಾಧ್ಯಮಗಳಲ್ಲಿಯೂ ಪ್ರಕಟವಾಗಿವೆ.





ವಿಳಾಸ
ಕಲಾಪ್ರಸಾದ, ಅಂಚೆ ಇನ್ನಂಜೆ.
ಶಂಕರಪುರ, ಉಡುಪಿ ತಾಲೂಕು.
ಪಿನ್ ಕೋಡ್ 576122.
ಕರ್ನಾಟಕ ರಾಜ್ಯ. ಭಾರತ.
ಮಿಂಚಿನ ಅ೦ಚೆ
kollyurramachandrarao@gmail.com
ಮೊಬೈಲ್:
+91-8123709799
LEGAL INFORMATION
