Responsive Menu
Add more content here...
Gold Plate for About Page – Kannada Version

ನಾಟ್ಯ ಯಕ್ಷಗಾನದ ಅವಿಭಾಜ್ಯ ಅಂಗ. ಸ್ತ್ರೀ ಪಾತ್ರ ನಿರ್ವಹಣೆಗೆ ನೃತ್ಯದ ಸಾಂಗತ್ಯದ ಅಗತ್ಯತೆಯನ್ನು ಮನಗಂಡಿದ್ದ ಮೇಳದ ಯಜಮಾನರಾಗಿದ್ದ ಕಲ್ಲಾಡಿ ಕೊರಗಶೆಟ್ಟರ ನೆರವು ಮಾರ್ಗದರ್ಶನದಡಿ ಶ್ರೀ ಕೋಳ್ಯೂರುರವರು, ಮಂಗಳೂರು ಕದ್ರಿಯ ಉಚ್ಚಿಲ ಕೃಷ್ಣ ರಾವ್ ಇವರಿಂದ ಭರತನಾಟ್ಯ ತರಭೇತಿ ಹೊಂದಿದರು. ತನ್ನ ಯಕ್ಷಗಾನದ ಗುರುಗಳಾದ ಕುರಿಯ ವಿಟ್ಠಲ ಶಾಸ್ತ್ರಿಯವರ ನೆರವಿನಿಂದ ಹೆಸರುವಾಸಿ ಗುರುಗಳಾದ ಕೊಚ್ಚಿಯ ಪರಮಶಿವಂ ಇವರಿಂದ ಕಥಕ್ಕಳಿಯನ್ನೂ ಕಲಿತುಕೊಂಡವರಿವರು. ಮೇಳಗಳ ತಿರುಗಾಟ ಮುಗಿದ ಕೂಡಲೆ ಮಳೆಗಾಲ ಎಂದು ವಿಶ್ರಾಂತಿ ಪಡೆಯದೆ ನೇರವಾಗಿ ನಾಟ್ಯಭ್ಯಾಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು..

Kuriya Vitthala Shastri

ಯಕ್ಷಗಾನ ಪ್ರದರ್ಶನ , ರಂಗ ಪ್ರಯೋಗಗಳಲ್ಲಿ ಆಧುನಿಕತೆ ಕಾಣತೊಡಗಿದವು. ಸಭಾಲಕ್ಷಣ ಆಡುವುದರಲ್ಲಿ ಬಾಲಗೋಪಾಲ ಕುಣಿತದ ಬದಲಿಗೆ ಗೊಂಬೆಯಾಟ, ಸ್ತ್ರೀವೇಷದ ಕುಣಿತಕ್ಕೆ ಪರ್ಯಾಯವಾಗಿ ತರಭೇತುಗೊಂಡ ಕೋಳ್ಯೂರುರವರು ಹಾಗೂ ಸಮಕಾಲೀನ ಕಲಾವಿದರ ಭರತನಾಟ್ಯ ಕುಣಿತ – ಪ್ರದರ್ಶನಗಳು ನವೀನ ಆಕರ್ಷಣೆಗಳಾಗಿ ಮೂಡಿಬರಲು ಸಾಧ್ಯವಾದವು. 

ನಾಟ್ಯಕ್ಕೆ ಒಂದು ಭಾವವಿದೆ, ಭಾಷೆಯಿದೆ ಮತ್ತು ರಸಸೃಷ್ಟಿಯ ಉದ್ದೇಶವಿದೆ ಎಂಬುದನ್ನು ಕಲಿತುಕೊಂಡರು. ಪರಿಣಾಮವಾಗಿ ಯಕ್ಷಗಾನ ಪ್ರದರ್ಶನಗಳಲ್ಲಿ ಇವರ ಸ್ತ್ರೀ ವೇಷ ಪಾತ್ರಗಳ ನೃತ್ಯ – ನಾಟ್ಯ – ಅಭಿನಯಗಳು ಕೇವಲ ಕಾಲುಗಳಿಗೆ ಮಾತ್ರ ಸೀಮಿತವಾಗದೆ, ಕಣ್ಣು. ಕೈ, ಚಲನ – ವಲನ, ಬಾಗು – ಬೆಳಕು, ಮುಖಭಾವ ಎಲ್ಲವೂಗಳ ಭಾವಾನುಶೀಲನ ನೃತ್ಯಗಳಾದವು. ಇದನ್ನು ಕರಗತಮಾಡಿಸಿಕೊಳ್ಳಲು ಕಾರಣೀಭೂತರುಗಳಾದ ಮೇಳದ ಯಜಮಾನರುಗಳನ್ನು ಮತ್ತು ಕಲಿಸಿದ ಗುರುಗಳನ್ನೂ ಸದಾ ನೆನಪಿಸಿಕೊಳ್ಳುತ್ತಾರೆ.

ವಿಳಾಸ

ಕಲಾಪ್ರಸಾದ, ಅಂಚೆ ಇನ್ನಂಜೆ.
ಶಂಕರಪುರ, ಉಡುಪಿ ತಾಲೂಕು.
ಪಿನ್ ಕೋಡ್ 576122.
ಕರ್ನಾಟಕ ರಾಜ್ಯ. ಭಾರತ.

ಮಿಂಚಿನ ಅ೦ಚೆ

kollyurramachandrarao@gmail.com

ಮೊಬೈಲ್:

+91-8123709799