ಸಮಾಜದ ಮನ್ನಣೆಗಳು
ಸ್ಥಳೀಯ, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದ ಅಭಿನಂದನೆ, ಪುರಸ್ಕಾರ, ಪ್ರಶಸ್ತಿಗಳು, ವಾರಾಳವಾಗಿ ಕೋಳ್ಳೂರರಿಗೆ ಬಂದಿವೆ.
೨೦೦೨ರಲ್ಲಿ ಬೆಂಗಳೂರಿನಲ್ಲಿ ದೊರೆತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೧೯೯೬ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ೨೦೦೬ರಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ೨೬-೨-೨೦೦೮ರಲ್ಲಿ ದಿಲ್ಲಿಯಲ್ಲಿ ರಾಷ್ಟ್ರಪತಿ ಶ್ರೀಮತಿ ಪ್ರತಿಭಾದೇವಿ ಸಿಂಗ್ ಪಾಟೀಲ್ ಅವರಿಂದ ರಾಷ್ಟ್ರಪ್ರಶಸ್ತಿ (ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ) ಮತ್ತು ೬-೪-೨೦೧೦ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ದೊರೆತ ‘ಗೌರವ ಡಾಕ್ಟರೇಟ್’ ಇವು ಇವರ ಸಾಧನೆಯ ಮನ್ನಣೆಯ ತುರಾಯಿಯ ಮಿನುಗುವ ಗರಿಗಳು,
ಉಡುಪಿಯ ಶಿರಿಬೀಡಿನಲ್ಲಿ ಶ್ರೀದೇವಿ ಟೆಕ್ಸ್ಟೈಲ್ಸ್ನ ಎಂ.ಎಸ್. ಕೃಷ್ಣನ್, ಅಮ್ಮುಂಜೆ ನಾಗೇಶ ನಾಯಕ್, ‘ನಿರ್ಮಲ ನಿಲಯ’ ಸುಂದರಶೆಟ್ಟಿ, ಕೆ.ಎಂ. ರಾಘವ ನಂಬಿಯಾರ್ ನೇತೃತ್ವದಲ್ಲಿ ೧೯೭೭ರಲ್ಲಿ ಕರ್ನಾಟಕ ಯಕ್ಷಗಾನ ನಾಟಕ ಸಭಾದ ವೇದಿಕೆಯಲ್ಲಿ ಕಳ್ಯೊರರನ್ನು ಸಂಮಾನಿಸಿದ ಬಳಿಕ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲೂ, ಮುಂಬಯಿ, ಬೆಂಗಳೂರು ಗಳಲ್ಲೂ ಬಹಳ ಕಡೆ ಪ್ರೀತ್ಯಾದರಗಳನ್ನು ತೋರಿ ಸಂಮಾನಿಸಿದ್ದಾರೆ.
ಬಹ್ಮನ್ ಯಕ್ಷಗಾನ ಅಭಿಮಾನಿಗಳು ಕುಂದಾಪುರದ ವಕೀಲ ಯಕ್ಷಗಾನ ಕಲಾವಿದ – ಸಂಘಟಕ ಎಂ.ಎಂ. ಹೆಗ್ಡೆ ನೇತೃತ್ವದಲ್ಲಿ ಕಾಳಿಂಗ ನಾವಡರು, ಮಂಟಪ ಪ್ರಭಾಕರ ಉಪಾಧ್ಯರು ಮೊದಲಾವರಿದ್ದವೃತ್ತಿ ಕಲಾವಿದರನ್ನು ಕರೆಸಿದಾಗ ಕೋಳ್ಯೊರರು ತಂಡದಲ್ಲಿರಬೇಕೆಂದು ಕಡ್ಡಾಯ ಮಾಡಿದರಂತೆ. ಅಲ್ಲಿನ ಪ್ರದರ್ಶನದಲ್ಲಿ ಇವರ ರಂಗ ಪ್ರವೇಶಕ್ಕೆ ಕರಡಾತನದ ಸುರಿಮಳೆ. ನೇಪಥ್ಯದಲ್ಲಿ ಕಲಾವಿದರೊಬ್ಬರು ಉದ್ಗರಿಸಿದರಂತೆ, ‘ಆನೆಗೆ ಗಂಟೆ ಕಟ್ಟಬೇಕೆಂದಿದೆಯೇ?’